ನಂಬದಿರೂ ಈ ಮೈಲ್ ಸತ್ಯವಲ್ಲಾ
ನೆಟಿನನಾಭನ ಭಜಿಸಿ ಸುಖಿಯಾಗು ನೆಟಿಜಾ...
"ಏನು", "ಯಾರಿಗೆ" ಗಳ ಮೇಲೆ "ಎಲ್ಲಿಂದ"
ಹೊದಿಕೆ
ಜೊತೆಗೊಂದು ಜೋಡಣೆಯ ಫ಼ೈಲಿಹುದೂ
ಹಲವು ಆಮಿಷಗಳ ಬೀಡು, ವೈರಸುಗಳ ಗೂಡು,
ಮೇಲು ನೋಟವ ನಂಬಿ ಕೆಡಬೇಡ ನೆಟಿಜಾ
ನಂಬದಿರೂ ಈ ಮೈಲ್ ಸತ್ಯವಲ್ಲಾ
ನೆಟಿನ ನಾಭನ ಭಜಿಸಿ ಸುಖಿಯಾಗು ನೆಟಿಜಾ...
ಈ ಮೈಲು ಹಿತವೆಂದು, ಮತಿ ಮರೆತು ಮಮತೆಯಲಿ
ಅತಿ ಕಾಂಕ್ಷೆಯಿಂದ ದುರ್ವಿಷಯಗಳಿಗೊಲಿದೂ
ಸತತ ಸೈಬರ್ ಪತಿಯ ಶರಣು ಶರಣೆನದೆ,
ಗತಿಶೂನ್ಯನಾಗಿ ಕೆಡಬೇಡ ನೆಟಿಜಾ
ನಂಬದಿರೂ ಈ ಮೈಲ್ ಸತ್ಯವಲ್ಲಾ
ನೆಟಿನನಾಭನ ಭಜಿಸಿ ಸುಖಿಯಾಗು ನೆಟಿಜಾ...
ಅತಿ ಸಿರಿಯ ಬಯಸದೆ, ಸುಳ್ಳು ಕಪಟಕೆ ಒಲಿಯದೆ
ಭದ್ರತೆಯ ಅರಿವನು ಬೆಳಸಿಕೊ ನೆಟಿಜಾ
ಭದ್ರತಾ ಸ್ತುತಿಯ ಕೇಳು, ಭದ್ರತಾ
ಕೀರ್ತನೆಯ ಮಾಡು
ಭದ್ರ ನೆಟಿಂದರ ಒಲಿದು ಪಾಲಿಸುವಾ
ನಂಬದಿರೂ ಈ ಮೈಲ್ ಸತ್ಯವಲ್ಲಾ
ನೆಟಿನನಾಭನ ಭಜಿಸಿ ಸುಖಿಯಾಗು ನೆಟಿಜಾ...
...ನಾವಿ